ಪ್ರೇಮ್ ಅವರು ದಿ ವಿಲನ್ ಚಿತ್ರದ ಇಂಟ್ರೊಡಕ್ಷನ್ ಹಾಡಿಗಾಗಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ | Filmibeat Kannada

2018-01-11 1,081

'ದಿ ವಿಲನ್' ಸಿನಿಮಾ ಟೀಸರ್ ರಿಲೀಸ್ ಯಾವಾಗ ಅಂತ ಒಂದು ಕಡೆ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಈಗ ಈ ಸಿನಿಮಾ ಮತ್ತೆ ಒಂದು ಕಾರಣಕ್ಕೆ ಸುದ್ದಿ ಮಾಡಿದೆ. 'ದಿ ವಿಲನ್' ಚಿತ್ರದಲ್ಲಿ ಆಮಿ ಜಾಕ್ಸನ್ ನಾಯಕಿ ಆಗಿದ್ದರು. ಆದರೆ ಅದರ ಜೊತೆಗೆ ಚಿತ್ರದಲ್ಲಿ ಇನ್ನು ಆರು ನಾಯಕಿಯರು ಇರುತ್ತಾರಂತೆ. ಚಿತ್ರದ ಸ್ಪೆಷಲ್ ಹಾಡಿನಲ್ಲಿ ಆರು ನಟಿಯರು ಹೆಜ್ಜೆ ಹಾಕಲಿದ್ದಾರೆ. 'ದಿ ವಿಲನ್' ಸಿನಿಮಾ ಇಂಟ್ರೊಡಕ್ಷನ್ ಹಾಡಿಗೆ ಪ್ರೇಮ್ ದೊಡ್ಡ ಪ್ಲಾನ್ ಮಾಡಿದ್ದಾರೆ. ಶಿವರಾಜ್ ಕುಮಾರ್ ಮತ್ತು ಸುದೀಪ್ ಇಬ್ಬರು ಈ ಹಾಡಿನಲ್ಲಿ ಇರಲಿದ್ದು, ಅದ್ದೂರಿಯಾಗಿ ಈ ಹಾಡು ಮೂಡಿ ಬರಲಿದೆಂತೆ. ವಿಶೇಷ ಅಂದರೆ ಆರು ನಟಿಮಣಿಯರ ಜೊತೆ ಶಿವಣ್ಣ ಮತ್ತು ಸುದೀಪ್ ಹೆಜ್ಜೆ ಹಾಕಿದ್ದಾರೆ. ಆದರೆ ಆರು ನಟಿಯರು ಯಾರು ಎಂಬುದು ಇನ್ನೂ ಫೈನಲ್ ಆಗಿಲ್ಲ.

Prem definitely knows how to build it for the audience . After sunny leone and mallika Sherawath for his new movie " The villain " he is making 6 kannada actresses dance with Sudeep and Shivraj Kumar

Videos similaires